Posts

WHEN KK REGION DREAMS COMES TRUEWITH RAILWAY BASIC AMENITIES INFRASTRUCTURE

When Will the Kalaburagi–Wadi Railway Section Get Justice? When will the continuous neglect, discriminatory treatment, and delays by the Solapur Railway Division and the Central Railway Zone come to an end? It has been a long-standing demand of the people of this region that major railway stations on the Kalaburagi–Wadi railway section—including Kalaburagi, Wadi, Shahabad, and Ganagapur Road—be provided with modern facilities. In August 2023, under the first phase of the Amrit Bharat Station Scheme, foundation stones were laid for the development of these stations, and funds were also sanctioned by the Central Government. However, even after several years, the works have not progressed at the expected pace, causing serious dissatisfaction among the people of this region. Every time people raise questions, they hear big assurances and responses such as, “The work is in progress” and “It will be completed soon.” But where is the expected change on the ground? What is the status of t...

ಕಲಬುರಗಿ ವಾಡಿ ರೈಲ್ವೆ ಸೆಕ್ಷನ್ ಆಗುವ ನಿರಂತರ ಅನ್ಯಾಯ ನಿಲ್ಲೋದು ಯಾವಾಗ

ಕಲಬುರಗಿ–ವಾಡಿ ರೈಲ್ವೆ ಸೆಕ್ಷನ್‌ಗೆ ನ್ಯಾಯ ಯಾವಾಗ? ಸೋಲಾಪುರ ರೈಲ್ವೆ ಡಿವಿಷನ್ ಹಾಗೂ ಸೆಂಟ್ರಲ್ ರೈಲ್ವೆ ಝೋನ್‌ನ ನಿರಂತರ ನಿರ್ಲಕ್ಷ್ಯ, ಮಲತಾಯಿ ಧೋರಣೆ ಮತ್ತು ವಿಳಂಬಕ್ಕೆ ಕೊನೆ ಯಾವಾಗ? ಕಲಬುರಗಿ–ವಾಡಿ ರೈಲ್ವೆ ಸೆಕ್ಷನ್‌ನ ಕಲಬುರಗಿ, ವಾಡಿ, ಶಹಾಬಾದ್, ಗಣಗಾಪುರ ರೋಡ್ ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಿಗೆ ಆಧುನಿಕ ಸೌಲಭ್ಯಗಳು ದೊರೆಯಬೇಕು ಎಂಬುದು ಈ ಭಾಗದ ಜನರ ಬಹುಕಾಲದ ಬೇಡಿಕೆ. 2023ರ ಆಗಸ್ಟ್‌ನಲ್ಲಿ ಮೊದಲ ಹಂತದ ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆ ಅಡಿಯಲ್ಲಿ ಅಭಿವೃದ್ಧಿಗೆ ಅಡಿಗಲ್ಲು ಹಾಕಿ, ಕೇಂದ್ರ ಸರ್ಕಾರದಿಂದ ಅನುದಾನವೂ ಒದಗಿಸಲಾಯಿತು. ಆದರೆ ವರ್ಷಗಳು ಕಳೆದರೂ ನಿರೀಕ್ಷಿತ ವೇಗದಲ್ಲಿ ಕಾಮಗಾರಿಗಳು ನಡೆಯದಿರುವುದು ಈ ಭಾಗದ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಪ್ರತಿ ಬಾರಿ ಜನರು ಪ್ರಶ್ನಿಸಿದಾಗ ದೊಡ್ಡ ದೊಡ್ಡ ಭರವಸೆಗಳು, “ಕೆಲಸ ನಡೆಯುತ್ತಿದೆ”, “ಶೀಘ್ರದಲ್ಲೇ ಆಗಲಿದೆ” ಎಂಬ ಉತ್ತರಗಳು ಕೇಳಿಬರುತ್ತವೆ. ಆದರೆ ನೆಲಮಟ್ಟದಲ್ಲಿ ನಿರೀಕ್ಷಿತ ಬದಲಾವಣೆ ಎಲ್ಲಿ? 2013–14ರಲ್ಲಿ 2ನೇ ಪಿಟ್ ಲೈನ್‌ಗಾಗಿ ನೀಡಲಾದ ಅನುದಾನದ ಸ್ಥಿತಿ ಏನು? ಇಷ್ಟು ವರ್ಷ ಕಳೆದರೂ 2ನೇ ಪಿಟ್ ಲೈನ್ ಕಾಮಗಾರಿ ಏಕೆ ಆರಂಭವಾಗಿಲ್ಲ? ಅನುದಾನ ಬಿಡುಗಡೆಯಾಗಿದ್ದರೆ ಅದರ ಬಳಕೆ ಎಲ್ಲಿ ಆಯಿತು? ಕಾಮಗಾರಿ ವಿಳಂಬಕ್ಕೆ ನಿಖರ ಕಾರಣವೇನು? — ಈ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕು. ಇದು ಕೇವಲ ಒಂದು ರೈಲು ನಿ...

ಕಲ್ಯಾಣ ಕರ್ನಾಟಕದ ಕಲ್ಯಾಣ ಆಗೋದು ಯಾವಾಗ

 ಕಲ್ಯಾಣ ಕರ್ನಾಟಕಕ್ಕೆ ನಿಜವಾಗಿಯೂ ಯಾವಾಗ ಕಲ್ಯಾಣ? ಕಲ್ಯಾಣ ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪರಿಣಿತರು, ತಜ್ಞರು ಮತ್ತು ಅನುಭವಿಗಳಿದ್ದಾರೆ. ಆದರೆ ನಿಜವಾದ ಪ್ರಶ್ನೆ ಏನೆಂದರೆ — ನಮ್ಮ ರಾಜಕೀಯ ನಾಯಕರು ತಾವು ನಿರ್ವಹಿಸುವ ಕ್ಷೇತ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದಾರೆಯೇ? ಮಾಹಿತಿ ಇಲ್ಲದಿದ್ದರೆ, ಕನಿಷ್ಠ ಆ ಕ್ಷೇತ್ರದ ಪರಿಣಿತರ ಸಲಹೆ ಮತ್ತು ಮಾರ್ಗದರ್ಶನ ಪಡೆಯಲು ಸಮಯ ಮೀಸಲಿಡಬೇಕಲ್ಲವೇ? ತಜ್ಞರ ಜ್ಞಾನವನ್ನು ಬಳಸಿಕೊಳ್ಳದೆ, ದೂರದೃಷ್ಟಿಯ ಕೊರತೆಯಿಂದ ರಾಜಕೀಯ ನಡೆಸಿದರೆ ನಮ್ಮ ಪ್ರದೇಶದ ಅಭಿವೃದ್ಧಿ ಹೇಗೆ ಸಾಧ್ಯ? ಇಂದು "ಕಲ್ಯಾಣ ಕರ್ನಾಟಕ" ಎಂಬ ಹೆಸರಿದೆ. ಆದರೆ ಹೆಸರಿನಲ್ಲಿ ಮಾತ್ರ ಕಲ್ಯಾಣ, ಅಭಿವೃದ್ಧಿಯಲ್ಲಿ ಮಾತ್ರ ಹಿಂದುಳಿದ ಸ್ಥಿತಿ ಮುಂದುವರಿಯಬೇಕೇ? ನಮ್ಮ ನಿರ್ಲಕ್ಷ್ಯ ಮತ್ತು ದೂರದೃಷ್ಟಿಯ ಕೊರತೆಯಿಂದ ಎಷ್ಟೋ ಮಹತ್ವದ ಯೋಜನೆಗಳು ನಮ್ಮ ಕೈತಪ್ಪಿ ಹೋಗಿವೆ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗಿದೆ — ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ, AIIMS, NIIT, NIMZ, ರೈಲ್ವೆ ಕೋಚ್ ಕಾರ್ಖಾನೆ ಸೇರಿದಂತೆ ಹಲವು ದೊಡ್ಡ ಯೋಜನೆಗಳ ವಿಚಾರದಲ್ಲಿ ನಾವು ಇನ್ನಷ್ಟು ಗಂಭೀರವಾಗಿ ಆತ್ಮಾವಲೋಕನ ಮಾಡಬೇಕಿದೆ. ಸ್ವಾತಂತ್ರ್ಯ ಪಡೆದು 79 ವರ್ಷಗಳಾದರೂ, ನಮ್ಮ ಭಾಗದ ಅನೇಕ ಕುಟುಂಬಗಳ ಜನರು ಉದ್ಯೋಗಕ್ಕಾಗಿ ದೊಡ್ಡ ನಗರಗಳಿಗೆ ಗುಳೆ ಹೋಗಬೇಕಾದ ಪರಿಸ್ಥಿತಿ ಮುಂದುವರಿದಿರುವುದು ಅತ್ಯಂತ ನೋವಿನ ಸಂಗತಿ. ಇದಕ್ಕಿಂತ...